Kalpane Poem in January 2010 issue of Mayura Monthly
Elli Hodaro Geleya by Bedre Manjunath
ನವೆಂಬರ್ 2010 ರ ಕಲ್ಪನೆ ಕವನ :ಎಲ್ಲಿ ಹೋದರೋ, ಗೆಳೆಯಾ?
ಚಿಣ್ಣಿ ಕೋಲು ಚೆಂಡು ಹಿಡಿದ
ಬೆಳಗು ಬೈಗು ಆಡಿ ದಣಿದ
ಹರಿದ ಚೆಡ್ಡಿ ಸರದಾರರೆಲ್ಲ
ಎಲ್ಲಿ ಹೋದರೋ, ಗೆಳೆಯಾ?
ಬುಗುರಿ ತಿರುವಿ ಗುನ್ನ ಹಾಕಿ
ಗೋಲಿ ಹೊಡೆದು ಕೋಲು ನೂಕಿ
ಪಾಟಿ ಹಿಡಿದ ತುಂಟರೆಲ್ಲ
ಎಲ್ಲಿ ಹೋದರೋ, ಗೆಳೆಯಾ?
ಪಾಠವೆಂಬ ಆಟ ಆಡಿ
ಬಡಿಗೆ ಹಿಡಿದು ಜಗಳ ಮಾಡಿ
ಬಯಲ ಗೆದ್ದ ರಾಜರೆಲ್ಲ
ಎಲ್ಲಿ ಹೋದರೋ, ಗೆಳೆಯಾ?
ಕೋತಿಯಾಗಿ ಮರವನೇರಿ
ಕಲ್ಲುಪುರಾಣಿ ಗೊಬ್ಬರ ತೂರಿ
ರಸ್ತೆಯ ಅಲೆದ ಪೋಲಿಗಳೆಲ್ಲ
ಎಲ್ಲಿ ಹೋದರೋ, ಗೆಳೆಯಾ?
ಕುಸ್ತಿಮಾಡಿ ಲಗೋರಿ ಹೊಡೆದು
ಖೊಖೊ ಕಬಡ್ಡಿ ಗಾಡಿ ಎಳೆದು
ಧೀಂಗನೆ ದಾಂಗುಡಿ ಇಟ್ಟವರೆಲ್ಲಾ
ಎಲ್ಲಿ ಹೋದರೋ, ಗೆಳೆಯಾ?
ಕಲ್ಪನೆ : ಬೇದ್ರೆ ಮಂಜುನಾಥ
ALPANE - POEM BY BEDRE MANJUNATH - MAYURA MONTHLY 2008 AUGUST

BEDRE MANJUNATH
MAYURA MONTHLY
2008 AUGUST
ಬದುಕಿನ ಪಾಠ ನಡೆದಿದೆ
ಪ್ರಕೃತಿಯ ಮಡಿಲಲ್ಲಿ
ಭೂದೇವಿ ಗುಡಿಯಲ್ಲಿ
ಮಣ್ಣ ಕಣ ಕಣದಲ್ಲಿ.
ಅಕ್ಷರ ತಿದ್ದುವ ಕೈಗಳು
ನೇಗಿಲ ಹಿಡಿದಿವೆ ಇಲ್ಲಿ
ಜೋಡೆತ್ತಿನ ಜೊತೆಯಲ್ಲಿ
ಉತ್ತು ಬಿತ್ತುವ ಕಾಯಕದಲ್ಲಿ.
ಬೆಳೆವ ಸಿರಿ ಮೊಳಕೆಯಲ್ಲಿ
ಭವ್ಯ ಭವಿಷ್ಯದ ಬಯಕೆಯಲ್ಲಿ
ಸವಿಗನಸುಗಳ ಸಾಕ್ಷಾತ್ಕಾರದಲ್ಲಿ
ಮಣ್ಣ ಮಕ್ಕಳು ತೊಡಗಿಹರಿಲ್ಲಿ.
ಅನ್ನದಾತ ಚಿಣ್ಣರೇ, ಕೇಳಿರಿ ಇಲ್ಲಿ
ಮಣ್ಣ ಕಾಯಕದ ಜೊತೆ ಜೊತೆಯಲ್ಲಿ
ಓದು ಬರಹ ಕಲಿಯಿರಿ ಶಾಲೆಗಳಲ್ಲಿ
ಶ್ರಮಿಸಿರಿ ಸಾಕ್ಷರ ನಾಡನು ಕಟ್ಟುವಲ್ಲಿ.
ದೇಶದ ಭವ್ಯ ಭವಿಷ್ಯವೇ ನೀವು
ಮೇಟಿ ವಿದ್ಯೆ ಕಲಿಯದಿರೆ ಸಾವು
ಬಿತ್ತಿರಿ ಸುಖ ಸಮೃದ್ಧಿಯ ಕನಸುಗಳನೀಗ
ಪಡೆಯಿರಿ ಶಾಂತಿ ನೆಮ್ಮದಿಯ ಫಸಲು ಬೇಗ.ಕಲ್ಪನೆ : ಬೇದ್ರೆ ಮಂಜುನಾಥ
(ಮಯೂರ ಮಾಸಿಕದ ಕಲ್ಪನೆ ಕವನ - ಜೂನ್ 2006)
ಪ್ರಕೃತಿಯ ಮಡಿಲಲ್ಲಿ
ಭೂದೇವಿ ಗುಡಿಯಲ್ಲಿ
ಮಣ್ಣ ಕಣ ಕಣದಲ್ಲಿ.
ಅಕ್ಷರ ತಿದ್ದುವ ಕೈಗಳು
ನೇಗಿಲ ಹಿಡಿದಿವೆ ಇಲ್ಲಿ
ಜೋಡೆತ್ತಿನ ಜೊತೆಯಲ್ಲಿ
ಉತ್ತು ಬಿತ್ತುವ ಕಾಯಕದಲ್ಲಿ.
ಬೆಳೆವ ಸಿರಿ ಮೊಳಕೆಯಲ್ಲಿ
ಭವ್ಯ ಭವಿಷ್ಯದ ಬಯಕೆಯಲ್ಲಿ
ಸವಿಗನಸುಗಳ ಸಾಕ್ಷಾತ್ಕಾರದಲ್ಲಿ
ಮಣ್ಣ ಮಕ್ಕಳು ತೊಡಗಿಹರಿಲ್ಲಿ.
ಅನ್ನದಾತ ಚಿಣ್ಣರೇ, ಕೇಳಿರಿ ಇಲ್ಲಿ
ಮಣ್ಣ ಕಾಯಕದ ಜೊತೆ ಜೊತೆಯಲ್ಲಿ
ಓದು ಬರಹ ಕಲಿಯಿರಿ ಶಾಲೆಗಳಲ್ಲಿ
ಶ್ರಮಿಸಿರಿ ಸಾಕ್ಷರ ನಾಡನು ಕಟ್ಟುವಲ್ಲಿ.
ದೇಶದ ಭವ್ಯ ಭವಿಷ್ಯವೇ ನೀವು
ಮೇಟಿ ವಿದ್ಯೆ ಕಲಿಯದಿರೆ ಸಾವು
ಬಿತ್ತಿರಿ ಸುಖ ಸಮೃದ್ಧಿಯ ಕನಸುಗಳನೀಗ
ಪಡೆಯಿರಿ ಶಾಂತಿ ನೆಮ್ಮದಿಯ ಫಸಲು ಬೇಗ.ಕಲ್ಪನೆ : ಬೇದ್ರೆ ಮಂಜುನಾಥ
(ಮಯೂರ ಮಾಸಿಕದ ಕಲ್ಪನೆ ಕವನ - ಜೂನ್ 2006)
2 comments:
The childrens poems deals with a good memory and image of younger days. The words are very simple and understandable to the children. nice poem.
K. AShok
ಸರ್, ಕವನ ತುಂಬಾ ಚೆನ್ನಾಗಿದೆ. ನೀವು ಕವನ ಬರೆಯುವುದರ ಬಗ್ಗೆ ತಿಳಿದಿರಲಿಲ್ಲ.. ಹಾಗಾಗಿ ಈ ಕವನ ನೋಡಿ ನಂಗೆ ತುಂಬಾ ಆಶ್ಚರ್ಯ ಆಯ್ತು. ಸಖತ್ ಆಗಿದೆ ಸರ್. ನಾನು ತುಂಬಾ ಸಲ ಆ ಆಟಗಳ ಬಗ್ಗೆ ಹೀಗೇ ಯೋಚಿಸುತ್ತಿದ್ದೆ. ಈಗಿನ ಹುಡುಗರ ಆಟಗಳನ್ನು ನೋಡಿದಾಗ, ಇವರೇನ್ ಆಟ ಆಡ್ತಾರಪ್ಪಾ ಅಂತ ಅನ್ನಿಸ್ತಿತ್ತು. ಅದನ್ನು ತುಂಬಾ ಚೆನ್ನಾಗಿ ಕವನ ರೂಪಕ್ಕೆ ಇಳಿಸಿದ್ದೀರ. ಹೇಳೋದಿಕ್ಕೂ ತುಂಬಾ ಸರಳವಾಗಿದೆ. ಅಷ್ಟೇ ಗಹನ ಚಿಂತನೆ ಇದೆ ಅದರಲ್ಲಿ. ತಮಗೆ ಧನ್ಯವಾದಗಳು..
ನಾಗೇಶ್ ಕೆ.ಓ. ಶಿಕ್ಷಕರು , ಚಳ್ಳಕೆರೆ
Post a Comment