Wednesday, December 31, 2008

Happy New Year 2009 - International Year of Astronomy


Happy New Year 2009 - International Year of Astronomy
ಹೊಸವರ್ಷದ ಹಾರ್ದಿಕ ಶುಭಾಶಯಗಳು
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ
ಮತ್ತು ತರಬೇತಿ ಸಂಸ್ಥೆ, ಚಿತ್ರದುರ್ಗ

Monday, November 3, 2008

Live I T Magazine from the Publishers of Gruhashobha - Delhi Press


ಸುದ್ದಿಗಿಡುಗ ದಿನಪತ್ರಿಕೆ - 21-11-2008


ಮಹಿಳೆಯರಿಗಾಗಿ

ಮಾಹಿತಿ ತಂತ್ರಜ್ಞಾನ ಮಾಸಿಕ

ಲೈವ್ ಐ.ಟಿ.

ಮಹಿಳೆಯರ ಮೆಚ್ಚಿನ ವಿವಿಧ ವಿಷಯಗಳ ಪತ್ರಿಕೆಗಳನ್ನು ಹೊರತರುತ್ತಿರುವ ಡೆಲ್ಲಿಪ್ರೆಸ್ ಪ್ರಕಾಶನವು ಇದೀಗ ಶರವೇಗದಿಂದ ಮುನ್ನುಗ್ಗುತ್ತಿರುವ ಮಾಹಿತಿ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ "ಲೈವ್ ಐ.ಟಿ." ಮಾಸಿಕವನ್ನು ಇದೇಅಕ್ಟೋಬರ್ ನಿಂದ ಹೊರತರುತ್ತಿದೆ. ಅತ್ಯುತ್ತಮ ಆರ್ಟ್ ಪೇಪರ್ ನಲ್ಲಿ ಮುದ್ರಣಗೊಳ್ಳುತ್ತಿರುವ, ಮಹಿಳೆಯರಿಗಾಗಿ ಮೀಸಲಾಗಿರುವ, ಈ ಪತ್ರಿಕೆಯ ಜೊತೆ ಲೆಕ್ಕಪತ್ರದ ವಿಶೇಷ ತಂತ್ರಾಂಶ ಎಕ್ಸೆಲ್ ಕೈಪಿಡಿ ಮತ್ತು ಅದರ ಪಾಠಗಳಿರುವ ಸಿ.ಡಿ.ಯನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಸಂಚಿಕೆಯ ಜೊತೆಯೂ ಇಂತಹ ಪ್ರತ್ಯೇಕ ಕೈಪಿಡಿ ಹಾಗೂ ಸಿ.ಡಿ. ದೊರೆಯಲಿದೆಯಂತೆ.ಸುಲಭ ಇಂಗ್ಲಿಷ್, ಅತ್ಯಾಕರ್ಷಕ ಚಿತ್ರಗಳು ಮತ್ತು ಮಾಹಿತಿ ಪೂರ್ಣ ಲೇಖನಗಳಿರುವ ಲೈವ್ ಐ.ಟಿ. ಸಾಮಾನ್ಯ ಓದುಗರಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಪರಿಚಯ ಮಾಡಿಕೊಡುತ್ತದೆ. ಕೊನೆಯ ಪುಟದಲ್ಲಿರುವ ತುಣುಕು ಮಾಹಿತಿ ಕಂಪ್ಯೂಟರ್ ಕ್ಷೇತ್ರದಲ್ಲಿ ಬಳಸಲಾಗುವ ವಿವಿಧ ಪಾರಿಭಾಷಿಕ ಪದಗಳನ್ನು ಪರಿಚಯಿಸುತ್ತದೆ.ಮಾಹಿತಿ ತಂತ್ರಜ್ಞಾನದ ಮೊದಲ ಮೆಟ್ಟಿಲೆನಿಸಿರುವ ಬ್ರೌಸರ್ಗಳ ಪರಿಚಯ, ವಿವಿಧ ಬಗೆಯ ವಿದ್ಯುನ್ಮಾನ ಪರಿಕರಗಳ ಮಾಹಿತಿ, ಸಲಹೆ ಸೂಚನೆಗಳು, ಒಳದನಿಯ ವೇದಿಕೆಯಾಗಿರುವ ಬ್ಲಾಗ್ಗಳನ್ನು ಆರಂಭಿಸುವುದು, ಅಂತರ್ಜಾಲದ ಡಿಕ್ಷನರಿಗಳು, ಅಂತರ್ಜಾಲದಲ್ಲಿ ವಧು-ವರರ ಹುಡುಕಾಟ, ಲ್ಯಾಪ್ಟಾಪ್ ಜಗತ್ತು, ಶ್ರವ್ಯ, ದೃಶ್ಯ, ಮಾಹಿತಿ ತಂತ್ರಾಂಶಗಳ ತಾಣಗಳು, ಇ-ಬ್ಯಾಂಕಿಂಗ್, ಇ-ವ್ಯವಹಾರ, ಪ್ರವಾಸಿ ತಾಣಗಳು, ಸಾಮಾಜಿಕ ಸಂಪರ್ಕ ತಾಣಗಳು, ಮಕ್ಕಳ ಮೆಚ್ಚಿನ ಕಂಪ್ಯೂಟರ್ ಗೇಮ್ಸ್, ಕಂಪ್ಯೂಟರ್ ವೈರಸ್, ಹ್ಯಾಕಿಂಗ್, ಉಚಿತ ತಂತ್ರಾಂಶ ತಾಣಗಳು, ಇ-ಮೇಲ್, ಕಂಪ್ಯೂಟರ್ ನೋಡಿಕೊಳ್ಳುವ ಬಗೆ, ಏನು? ಹೇಗೆ? ಏಕೆ? ಮೊದಲಾದ ಪ್ರಶ್ನೆಗಳಿಗೆ ಉತ್ತರ ಹೀಗೆ ಹತ್ತು ಹಲವು ವಿಷಯಗಳಿಂದ ಕೂಡಿರುವ ಮೊದಲ ಸಂಚಿಕೆ ಈಗಾಗಲೇ ಮಹಿಳೆಯರ, ಯುವತಿಯರ ಮನವನ್ನು ಗೆದ್ದು ಅವರ ಗಂಡಂದಿರು ಮತ್ತು ಮಕ್ಕಳ ಮೆಚ್ಚುಗೆಗೂ ಪಾತ್ರವಾಗಿದೆ.ಮೊದಲ ಸಂಚಿಕೆಯ ಯಶಸ್ಸು ಮುಂಬರುವ ಸಂಚಿಕೆಗಳ ಮೇಲೂ ಪ್ರಭಾವ ಬೀರಿ ಇನ್ನಷ್ಟು ಹೊಸ ವಿಷಯಗಳನ್ನು ಹೊತ್ತುತರುತ್ತವೆ. ಮಾರುಕಟ್ಟೆಯ ತಂತ್ರಗಳನ್ನು ಅರಿತಿರುವ ಡೆಲ್ಲಿ ಪ್ರೆಸ್ ಗ್ರೂಪ್ನ ಸ್ಥಾಪಕ ಹಾಗೂ ವ್ಯವಸ್ಥಾಪಕ ಶ್ರೀ ಪರೇಶ್ ನಾಥ್ ಅವರ ಪುತ್ರ ಅನಂತನಾಥ್ ಅವರ ನೇತೃತ್ವದಲ್ಲಿನ ಯುವ ಉತ್ಸಾಹಿ ಸಂಪಾದಕ ಮಂಡಳಿಯು ಹೊರತರುತ್ತಿರುವ "ಲೈವ್ ಐ.ಟಿ." ಮಾಸಿಕ ಮಹಿಳೆಯರ ಅಚ್ಚುಮೆಚ್ಚಿನ ಪತ್ರಿಕೆಯಾಗುವಲ್ಲಿ ಅನುಮಾನವಿಲ್ಲ.

Saturday, August 23, 2008

Model Teachers - Thammanna Mastararu - A Collection of Short Stories by Krishnamurthy Puranik - Review by Bedre Manjunath






Model Teachers

Thammanna Mastararu

ತಮ್ಮಣ್ಣ ಮಾಸ್ತರರು
A Collection of Short Stories by

Krishnamurthy Puranik

Review by

Bedre Manjunath

ಇಂತಹ ಶಿಕ್ಷಕರನ್ನು ನೀವು ಕಂಡಿದ್ದೀರಾ?

ಕೃತಿ : ತಮ್ಮಣ್ಣ ಮಾಸ್ತರರು (ಆಯ್ದ ಕಥೆಗಳು)
ಕೃತಿಕಾರರು : ಕೃಷ್ಣಮೂರ್ತಿ ಪುರಾಣಿಕ
ಪ್ರಕಾಶಕರು : ಗಂಗಾ ತರಂಗ ಪ್ರಕಾಶನ, ಗೋಕಾಕ
ಪುಟಗಳು : 88 ಬೆಲೆ : ರೂ.5=00
ಆವೃತ್ತಿ : 1984 (ಮೊದಲ ಆವೃತ್ತಿ)

ತಮ್ಮಣ್ಣ ಮಾಸ್ತರರು ನನ್ನ ತಂದೆ; ನನ್ನ ಗುರುಗಳು, ನಾಡಿನ ರಾಜಕೀಯ, ಸಾಂಸ್ಕೃತಿಕ ಬಾವುಟವನ್ನು ಎತ್ತಿ ಹಿಡಿದವರು. ಮಹಾದೇವಯ್ಯನಂಥವರು ಸಮಾಜ ಸೇವಾಧುರಂಧರರು. ಇವರು ಸಂಬಳದ ಶಿಕ್ಷಕರಾಗಿರಲಿಲ್ಲ; ವಿದ್ಯಾಥರ್ಿಗಳ ಜೀವನವನ್ನು ತಿದ್ದುವ ಮಹಾನುಭಾವರಾಗಿದ್ದರು. ಇವರು ಧುರೀಣರಲ್ಲಿ ಧುರೀಣರು. ಎಲೆಯ ಮರೆಯ ಕಾಯಿಯಾಗಿ ದುಡಿದು ಮಡಿದವರು. ಇತಿಹಾಸದ ಪುಟಗಳಲ್ಲಿ ಭದ್ರವಾಗಿ ಕುಳಿತವರು. ತಮ್ಮಣ್ಣ ಮಾಸ್ತರರ ಆದರ್ಶ ಘನವಾದದು. ಅವರು ಈಗ ಇಲ್ಲವಾದರೂ ಅವರು ಹಚ್ಚಿದ ನಂದಾದೀಪದ ಕುಡಿಗಳು ನಿತ್ಯ ನಂದಾದೀಪಗಳಾಗಿವೆ....
ಶಿಕ್ಷಕರು ಯಾವಾಗಲೂ ಆತ್ಮವಿಕಾಸದ ಮಾರ್ಗದಲ್ಲಿರಬೇಕು. ದಿನಗಳೆದಂತೆ ಶಿಕ್ಷಕರು ಆತ್ಮವಿಕಾಸ ಮಾಡುಕೊಳ್ಳುತ್ತಿರಬೇಕು. ಶಿಕ್ಷಕನ ಕೆಲಸ ಒಂದು ದಂಧೆ ಅಲ್ಲ; ಅದೊಂದು ಜ್ವಲಂತವಾದ ರಾಷ್ಟ್ರೀಯ ಸೇವೆ. ಗುರುಗಳನ್ನು ನೆನೆಸಿಕೊಳ್ಳುವ ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ತಮ್ಮಣ್ಣ ಮಾಸ್ತರರಂತಹ ಆದರ್ಶ ಶಿಕ್ಷಕರನ್ನು ನೆನೆಯುವುದೇ ಸುದಿನ. ಶಿಕ್ಷಕರನ್ನು ಕುರಿತು ಪುರಾಣಿಕರು ಬರೆದ ನೂರಾರು ಕಥೆಗಳಿಂದ ತಮ್ಮಣ್ಣ ಮಾಸ್ತರರು, ಮಹಾದೇವಯ್ಯನವರು, ಭೀಮಸೇನ ಆಚಾರ್ಯ (ಬಿಂಚಿಮಾ ಮಾಸ್ತರರು) ಮೊದಲಾದ ವಿದ್ಯಾದಾನವೇ ಪರಮದಾನವೆಂಬ ತಾದಾತ್ಮ್ಯಭಾವದಿಂದ ಬೋಧಿಸುತ್ತಿದ್ದ ಗುರುಗಳ ಚಿತ್ರಣವಿರುವ ಕಥೆಗಳನ್ನು ಆಯ್ದು ಈ ತಮ್ಮಣ್ಣ ಮಾಸ್ತರರು ಪುಸ್ತಕದಲ್ಲಿ ಪೋಣಿಸಲಾಗಿದೆ.

ನಿಜ ಜೀವನದಲ್ಲಿ ನಡೆದ ಒಂದೊಂದು ಘಟನೆಯೂ ಒಂದೊಂದು ಕಥೆಯಾಗಿ ಮೂಡಿಬಂದ ಪರಿ, ಪರೋಪಕಾರಕ್ಕಾಗಿ ತಮ್ಮ ಸರ್ವಸ್ವವನ್ನೂ ಮುಡಿಪಾಗಿಡುವ, ಪ್ರಾಣಾಪಾಯವನ್ನೂ ಲೆಕ್ಕಿಸದೆ ಸಹೋದ್ಯೋಗಿಗಳ ನೆರವಿಗೆ ಧಾವಿಸುವ, ಶಾಲೆಯ ಮಕ್ಕಳಿಗೆ ಮಾತ್ರ ಮಾಸ್ತರರಾಗಿರದೆ ಸಮಾಜಕ್ಕೂ ಶಿಕ್ಷಕರಾಗಿದ್ದ ತಮ್ಮಣ್ಣ ಮಾಸ್ತರರಿಗೆ ಸಿಗುತ್ತಿದ್ದ ಗೌರವ ಅಂದಿನ ಕಾಲದ ಯಾವ ಅಧಿಕಾರಿಗೂ ಸಿಗುತ್ತಿರಲಿಲ್ಲವೆಂದರೆ ಅತಿಶಯೋಕ್ತಿಯಲ್ಲ. ಅವರ ಸತ್ಯನಿಷ್ಠೆ ಅಸದಳವಾಗಿತ್ತು. ತಮ್ಮ ಕೆಲಸದಲ್ಲಿ ಅವರು ಸತ್ಯವನ್ನೇ ಪೂಜಿಸುತ್ತಿದ್ದರು. ಮಾತುಕತೆಗಳಲ್ಲಿ ಸತ್ಯದ ಸೌಂದರ್ಯವನ್ನು ಕಾಣುತ್ತಿದ್ದರು. ತಪ್ಪು ಮಾಡುವ ವಯಸ್ಸಿನಲ್ಲಿ ಮಕ್ಕಳು ತಪ್ಪು ಮಾಡುತ್ತಾರೆ. ಅವರನ್ನು ದಂಡಿಸುವ ಶಿಕ್ಷಕನೇ ದಂಡನಾರ್ಹನಾಗಿರುತ್ತಾನೆ. ದಂಡಿಸುವ ಶಿಕ್ಷಕನಲ್ಲಿ ಪಶುವೃತ್ತಿಯೇ ಬಂದುಬಿಡುತ್ತದೆ. ಹೊಡೆಯುವ ಶಿಕ್ಷಕನು ಕ್ರಿಮಿನಲ್ ಅಪರಾಧಿ ಎನ್ನುತ್ತಿದ್ದರು.

ಬೋಧನೆಯಲ್ಲಿ ಭಾವಸಮಾಧಿ ಹೊಂದುತ್ತಿದ್ದ ಮಹಾದೇವಯ್ಯ ಮಾಸ್ತರರು ಒಮ್ಮೆ ಜೈಮಿನಿ ಭಾರತದ ಆಯ್ದ ಕರುಣಾಳು ರಾಘವನಲ್ಲಿ ತಪ್ಪಿಲ್ಲ.... ಭಾಗವನ್ನು ಆವೇಶದಿಂದ ಪಾಠ ಮಾಡಿ ಕೊನೆಗೆ ಗದ್ಗಗ ಕಂಠದಲ್ಲಿ ಧನ್ಯ ....ಸೀತಾಮಾತೆ! ಎಂದದ್ದನ್ನು ಕೇಳಿದ ಶಾಲಾ ಇನ್ಸ್ಪೆಕ್ಟರ್ ತರಗತಿಯ ನಂತರ ಅವರ ಕಾಲಿಗೆ ಬಿದ್ದು, ನಿಮ್ಮ ಕಾವ್ಯ ರಸಾಸ್ವಾದನೆಯನ್ನು ನಿಮ್ಮ ಮುಖ್ಯಾಧ್ಯಾಪಕರಿಗೂ ನೀಡಬೇಕು ಮಹಾಶಯರೇ! ನೀವು ಶಿಕ್ಷಕರಲ್ಲ ಮಹಾದೇವಯ್ಯ! ಶಿಕ್ಷಕರ ಗುರುಗಳು! ಎಂದು ಮನಸಾ ಕೊಂಡಾಡಿದರು. ಕೊರಮ ರಾಮ ತನ್ನ ಗುಡಿಸಲು ಸೋರುತ್ತಿದ್ದರಿಂದ ಕೂರಲೂ ನೆಲೆ ಇಲ್ಲದಂತಹ ಪರಿಸ್ಥಿತಿಯಲ್ಲಿ ಕನ್ನಡ ಮಾಸ್ತರರು ನೀಡಿದ ಹೋಂವಕರ್್ ಮಾಡಲಿಲ್ಲವೆಂಬ ಕಾರಣಕ್ಕಾಗಿ ಬಿಂಚಿಮಾಸ್ತರರಿಂದ ದನಕ್ಕೆ ಬಡಿದಂತೆ ಬಡಿಯಲ್ಪಟ್ಟ. ಮಹದೇವಯ್ಯ ಮಾಸ್ತರರು ಇದನ್ನು ನೋಡಿದಾಗ ಅವರ ಕರುಳು ಚುರುಕ್ ಎಂದಿತು. ಅಂದು ಸಂಜೆ ಬಿಂಚಿಮಾಸ್ತರರನ್ನು ಕರೆದುಕೊಂಡು ಕೊರಮರ ಗುಡಿಸಲ ಸಾಲಿಗೆ ಭೇಟಿ ನೀಡಿ, ಕತ್ತಲಲ್ಲಿ, ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಕೊರಮ ರಾಮನ ತಾಯಿ ಒಳಗೆ ನೆಲಗಚ್ಚಿನ ರಾಡಿಯನ್ನು ಹೊರ ಚೆಲ್ಲುತ್ತಿದ್ದದ್ದು, ರಾಮ ತಾಯಿಗೆ ಸಹಾಯಮಾಡುತ್ತಾ ನಿಲ್ಲಲೂ ನೆಲೆ ಇಲ್ಲದ ಸ್ಥಿತಿಯಲ್ಲಿ ಒದ್ದಾಡುತ್ತಿದ್ದದ್ದನ್ನು ತೋರಿಸಿ, ಈ ಸ್ಥಳದಲ್ಲಿ ವಾಸಿಸುತ್ತಿರುವ ನಿಮ್ಮ ಶಿಷ್ಯ ಹೋಂ ವಕರ್್ ಹೇಗೆ ಬರೆಯಲು ಸಾಧ್ಯ? ಎಂದು ಪ್ರಶ್ನಿಸಿ, ಹಿಂದೆ ಮುಂದೆ ವಿಚಾರಿಸದೇ ಮಕ್ಕಳನ್ನು ದಂಡಿಸುವುದು ಅಪರಾಧ ಎಂದು ತಿದ್ದಿ, ನಮ್ಮ ಪ್ರಜಾರಾಜ್ಯಲಕ್ಷ್ಮೀ ಮಂತ್ರಿ ಮಾನ್ಯರ, ಶೆಟ್ಟಿ ಸಾಹುಕಾರರ ಸೌಧಗಳನ್ನು ಹೊಕ್ಕಂತೆ ಈ ಬಡವರ ಗುಡಿಸಲುಗಳನ್ನು ಇನ್ನೂ ಪ್ರವೇಶಿಸಲಿಲ್ಲ ಬಿಂಚಿಯವರೇ! ಎಂದದ್ದು ಸಾರ್ವಕಾಲಿಕ ಸತ್ಯವಾಗಿ ನಿಂತಿರುವ ಪರಿಸ್ಥಿತಿಯನ್ನು ಬಿಂಬಿಸುತ್ತದೆ. ಗುರು-ಶಿಷ್ಯರ ಸಂಬಂಧವೇನೆಂದೇ ಅರಿವಿಗೆ ಬರದಂತೆ ನಡೆದುಕೊಳ್ಳುತ್ತಿರುವ ಇಂದಿನ ಸಂಬಳದ ಶಿಕ್ಷಕರು, ಶಿಷ್ಯೆಯರ ಮೇಲೇ ಕಣ್ಣುಹಾಕುತ್ತಿರುವ ಮದೋನ್ಮತ್ತರು ಈ ಪುಟ್ಟ ಪುಸ್ತಕವನ್ನು ಅತ್ಯಗತ್ಯವಾಗಿ ಓದಲೇಬೇಕಾಗಿದೆ.

ಮಾನವೀಯ ನೆಲೆ ಎಂದರೆ ಏನು, ಗುರು ಶಿಷ್ಯನಿಗೋಸ್ಕರ ಎಷ್ಟೊಂದು ಪರಿತಪಿಸುತ್ತಾನೆ, ಶಿಷ್ಯ ಗುರುವನ್ನು ಎಷ್ಟೊಂದು ಆದರಿಸುತ್ತಾನೆ, ಪಾಠ ಬೋಧನೆ ಎಂದರೆ ಕೇವಲ ಪುಟಗಳಲ್ಲಿ ಮುದ್ರಿತವಾದದ್ದನ್ನು ಒರಲುವುದಲ್ಲ, ಬದಲಿಗೆ ಜೀವನ ಮೌಲ್ಯಗಳ ಆರಾಧನೆ, ಭಾವ ಸಮಾಧಿಯ ಅನುಭೂತಿ, ಮಾನವೀಯ ಗುಣಗಳ, ಅನುಭವಗಳ ಪರಸ್ಪರ ವಿನಿಮಯ ಆಗಬೇಕು ಎಂಬುದನ್ನು ತಿಳಿಸಿಕೊಡುವ ಈ ತಮ್ಮಣ್ಣ ಮಾಸ್ತರರು ಕೃತಿಯನ್ನು ನಮ್ಮ ಎಲ್ಲಾ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಓದಲೇಬೇಕು. ಸಕರ್ಾರ ಇತ್ತೀಚೆಗೆ ಎಲ್ಲಾ ಶಿಕ್ಷಕರಿಗೆ ತೆತ್ಸುಕೊ ಕೊರೆಯಾನಾಗಿಯವರ ತೊತ್ತೊಚಾನ್ ಮತ್ತು ಗಿಜುಭಾಯ್ ಬಧೇಕ ಅವರ ಹಗಲುಗನಸು ಕೃತಿಗಳನ್ನು ಹಂಚಿದಂತೆಯೇ ಈ ಕೃತಿಯನ್ನೂ ಹಂಚಿದಲ್ಲಿ ಪಾಠಬೋಧನೆಗೊಂದು ಹೊಸ ಆಯಾಮ ದೊರೆತಂತಾಗುತ್ತದೆ. 80 ಕಾದಂಬರಿಗಳು, 14 ಕಥಾ ಸಂಗ್ರಹಗಳು, 3 ಕವನ ಸಂಗ್ರಹಗಳು, 11 ಸರಳರಗಳೆ ಸಂಗ್ರಹ, 1 ವಿಮಶರ್ಾ ಗ್ರಂಥ ಮತ್ತು 7 ಮಕ್ಕಳ ಪುಸ್ತಕಗಳನ್ನು ರಚಿಸಿದ ಕೃಷ್ಣಮೂತರ್ಿ ಪುರಾಣಿಕರು ಒಟ್ಟು 19,879 ಪುಟಗಳಷ್ಟು ಮೃಷ್ಟಾನ್ನ ಭೋಜನ ಬಡಿಸಿದ್ದಾರೆ ಮತ್ತು ಇವೆಲ್ಲವೂ ಸೇರಿ 4,06,000 ಪ್ರತಿಗಳು ಮಾರಾಟವಾದ ದಾಖಲೆ ಇದೆ! ಇವರ ಹಲವು ಕಾದಂಬರಿಗಳನ್ನು ಆಧರಿಸಿದ ಚಲನಚಿತ್ರಗಳು ಜನಮನ ಸೂರೆಗೊಂಡಿವೆ.

(ಇಷ್ಟೆಲ್ಲಾ ದಾಖಲೆ ಮಾಡಿದ ಮಹನೀಯರ ಮಗಳು ಮೀರಾ ಪುರಾಣಿಕ ಇತ್ತೀಚೆಗೆ ಸಂಯುಕ್ತ ಕನರ್ಾಟಕ ಪತ್ರಿಕೆಯಲ್ಲಿ ಪ್ರಕಟಣೆ ನೀಡಿ ಕೇವಲ ಇಪ್ಪತ್ತೈದು ರೂಪಾಯಿಗಳಿಗೆ ಇವರ ಐದು ಕೃತಿಗಳನ್ನು ಕಳಿಸಿಕೊಡುವುದಾಗಿ ತಿಳಿಸಿದ್ದರು! ಮನಿಯಾರ್ಡರ್ ಕಳಿಸಿದಾಗ ಬಂದ ಕೇವಲ 4 ಹಳೆಯ ಪುಸ್ತಕಗಳಲ್ಲಿ ಬೆಲೆ ತಿದ್ದಿಸಿಕೊಂಡ ಮತ್ತು ಇನ್ನೂ ಹೆಚ್ಚಿಗೆ ಹಣಕಳಿಸಲು ಕಳಿಸಿದ ಮನವಿ ಪತ್ರದ ಒಕ್ಕಣೆ ಎಂಥಾ ತಂದೆಗೆ ಎಂಥಾ ಮಕ್ಕಳು ಎನಿಸುವಂತೆ ಮಾಡಿತು! ಅಪ್ಪನ ಪರಿಶ್ರಮ ಮಕ್ಕಳಿಗೆ ದುಡ್ಡುಮಾಡುವ ದುರಾಸೆಗೆ ದೂಡಿತೇ? ಪ್ರಸಿದ್ಧ ಸಾಹಿತಿಗಳ ಕೆಲವು ಮಕ್ಕಳು ಮಾಡುವ ಇಂತಹ ಸಣ್ಣತನದಿಂದ ದೊಡ್ಡವರ ಗೌರವಕ್ಕೆ ಕುಂದುಂಟಾಗದೇ?ಈ ಕುರಿತು ಹೇಳುವುದಕ್ಕೇನಾದರೂ ಉಳಿದಿದೆಯೇ?)

ಕೃತಿಯ ಪರಿಚಯ : ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಕೇಂದ್ರ, ಚಿತ್ರದುರ್ಗವಿಳಾಸ : ಪ್ರಸಾರ ನಿರ್ವಾಹಕರು, ಆಕಾಶವಾಣಿ, ಚಿತ್ರದುರ್ಗ - 577 501 ಫೋ: 94485 - 8908

Saturday, July 5, 2008

Indian Constitution - A book by Dr Geetha Krishnamurthy - Review by Bedre Manjunath

Suddigiduga Daily, Chitradurga 25-12-2008, Thursday



Indian Constitution
A book by
Dr Geetha Krishnamurthy

Review by
Bedre Manjunath

Thursday, April 3, 2008