ಐಸಾನ್ ಧೂಮಕೇತು ಇದೇ 2013ರ ನವೆಂಬರ್ 28 ರಿಂದ 2014ರ ಜನವರಿ ಎರಡನೇ ವಾರದವರೆಗೆ
ಮುಂಜಾನೆ ಮತ್ತು ಸಂಜೆ ಆಗಸದಲ್ಲಿ ಪ್ರಕಾಶಮಾನವಾಗಿ ಕಾಣಿಸುತ್ತಲಿದೆ ಎಂಬ ವರದಿ ಈಗ
ಸುಳ್ಳಾಗಿದೆ. ಇದೇ ನವೆಂಬರ್ 29 ರಂದು ಸೂರ್ಯನಿಗೆ 7,50,000 ಕಿಲೋಮೀಟರ್ಗಳಷ್ಟು
ಹತ್ತಿರದಲ್ಲಿ ಹಾದುಹೋಗುವಾಗ ಪುರರವಿ ಬಿಂದು (ಪೆರಿಹೀಲಿಯನ್ ಪಾಯಿಂಟ್) ತಲುಪುವು
ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸಿಡಿದು, ಕರಗಿ, ಸಣ್ಣ ಸಣ್ಣ ತುಣುಕುಗಳಾಗಿ ಚದುರಿ,
ದೂರ ಹೋಗಿದೆ. ಇದೀಗ ಅದರ ಫೋಟೋಗಳು ಮತ್ತು ವೀಡಿಯೋ ತುಣುಕುಗಳು ಅಂತರಜಾಲದಲ್ಲಿ
ಹರಿದಾಡುತ್ತಿವೆ. ನಾಸಾ ಮತ್ತು ಇತರ ಬಾಹ್ಯಾಕಾಶ ಸಂಸ್ಥೆಗಳು ಉಪಗ್ರಹಗಳ ಮೂಲಕ
ಸಂಗ್ರಹಿಸಿದ ಚಿತ್ರಗಳನ್ನು, ವೀಡಿಯೋಗಳನ್ನು ತಮ್ಮ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಬಾಹ್ಯಾಕಾಶ ವಿಜ್ಞಾನ ಆಸಕ್ತರೆಲ್ಲಾ ತಮ್ಮ ಕಣ್ಣುಗಳನ್ನು ಆಗಸದತ್ತ ನೆಟ್ಟು
ಹುಡುಕಾಡಿದ್ದರು. ಹಾಸನದಲ್ಲಿಯೂ ಭಾರತೀಯ ಜ್ಞಾನ ವಿಜ್ಞಾನ ಸಮಿತಿಯ ಸದಸ್ಯರು ಜನರಿಗೆ
ಆಸಕ್ತಿ ಮೂಡಿಸಿ, ಬೆಳಗಿನ ಜಾವವೇ ಆಗಸದಲ್ಲಿ ಗ್ರಹ-ತಾರೆಗಳನ್ನು ತೋರಿಸಲು, ಧೂಮಕೇತು
ವೀಕ್ಷಿಸಲು ಕಾರ್ಯಕ್ರಮ ಹಾಕಿಕೊಂಡು ಯಶಸ್ವಿಯಾಗಿತ್ತು. ಈಗಲೂ ಅದರ ಚಿತ್ರಗಳನ್ನು
ನೋಡಲು ಈ ಜಾಲತಾಣಗಳನ್ನು ಭೇಟಿಮಾಡಿರಿ: http://www.huffingtonpost.co.uk/2013/12/11/comet-ison-explanation-video_n_4423780.html?utm_hp_ref=fb&src=sp&comm_ref=false
ಕೃತಿ ಪರಿಚಯ : ಬೇದ್ರೆ ಮಂಜುನಾಥ, ಹಾಸನ ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಕೇಂದ್ರ, ಚಿತ್ರದುರ್ಗ ಸಂಪರ್ಕ ವಿಳಾಸ : ಕಾರ್ಯಕ್ರಮ ನಿವರ್ಾಹಕರು, ಆಕಾಶವಾಣಿ, ಹಾಸನ - 573 201 ಫೋ: 9448589089
Easy English 20 Words a Day - Article in Shikshana Shilpi Monthly of Dec 2013 Easy English Ready Steady Go... published by Navakarnataka Publications
Thank you Editors
Kannada
Kalike Malike of Thiru Srinivasachar Gopal published by Navakarnataka
Publications - Book Introduction in Shikshana Shilpi Monthly of Dec
2013 Thank you Editors
Kannada
Kalike Malike of T S Gopal published by Navakarnataka Publications -
Book Introduction in Jeevana Shikshana Monthly Dec 2013Thank you Editors