Karnataka Sangathi Handbook to be Revised - Letter in Prajavani 26 June 12

ಕರ್ನಾಟಕ ಸಂಗಾತಿ ಪರಿಷ್ಕಾರಗೊಳ್ಳಲಿ
ಕನ್ನಡ ಪುಸ್ತಕ ಪ್ರಾಧಿಕಾರವು 2002ರಲ್ಲಿ ಪ್ರೊ ಚಿ. ಶ್ರಿನಿವಾಸರಾಜು ಮತ್ತು ಬಸವರಾಜ ಕಲ್ಗುಡಿ ಅವರು ಸಂಪಾದಿಸಿದ `ಕರ್ನಾಟಕ ಸಂಗಾತಿ` ಸಾಮಾನ್ಯ ಜ್ಞಾನ ಕೈಪಿಡಿಯನ್ನು ಪ್ರಕಟಿಸಿತ್ತು. 2005ರಲ್ಲಿ ಅದೇ ಕೃತಿಯ ಮರುಮುದ್ರಣವೂ ಆಗಿತ್ತು. ಇದೀಗ ಮತ್ತೊಮ್ಮೆ ಮರುಮುದ್ರಣಕ್ಕಾಗಿ ಟೆಂಡರ್ ಕರೆದಿದೆ.
2011ರ ಜನಗಣತಿ ಆಧರಿಸಿದ, ತೀರಾ ಇತ್ತೀಚಿನ ಘಟನಾವಳಿಗಳು, ಯೋಜನೆಗಳು ಮತ್ತು ಅಭಿವೃದ್ಧಿಯ ಮಾಹಿತಿಯನ್ನು ಒಳಗೊಂಡಂತೆ ಹೊಸದಾಗಿ ಈ ಕರ್ನಾಟಕ ಸಂಗಾತಿ ಪರಿಷ್ಕಾರಗೊಳ್ಳಬೇಕಿದೆ. ಹಾಗೆ ಮಾಡದೆ ಸುಮ್ಮನೇ ಹಳೆಯ ಸರಕನ್ನೇ ಮರುಮುದ್ರಿಸುವುದರಿಂದ ಯಾವುದೇ ಲಾಭ ಆಗಲಾರದು. ಮರುಮುದ್ರಣಗಳು ಅಪ್ಡೇಟ್ ಆಗದೇ ಇದ್ದರೆ ಮೂಲೆ ಸೇರುವುದು ಖಚಿತ.
ಈ ಹಳಸಲು ಸರಕಿಗೆ ಬದಲಾಗಿ ಈಗಾಗಲೇ ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ಪ್ರಕಟಿಸಿರುವ ಕರ್ನಾಟಕ ಕೈಪಿಡಿ 2012 ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಡಿವಿಡಿ ಸಹಿತ ಅತ್ಯುತ್ತಮ ಮಾಹಿತಿಯ ಆಗರವಾಗಿದೆ. ಅದಕ್ಕೇ ಇನ್ನಷ್ಟು ರಿಯಾಯಿತಿ ದೊರೆಯುವಂತೆ ಮಾಡಿದಲ್ಲಿ ಬಹುತೇಕ ಎಲ್ಲಾ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲಿದೆ.