Monday, November 3, 2008

Live I T Magazine from the Publishers of Gruhashobha - Delhi Press


ಸುದ್ದಿಗಿಡುಗ ದಿನಪತ್ರಿಕೆ - 21-11-2008


ಮಹಿಳೆಯರಿಗಾಗಿ

ಮಾಹಿತಿ ತಂತ್ರಜ್ಞಾನ ಮಾಸಿಕ

ಲೈವ್ ಐ.ಟಿ.

ಮಹಿಳೆಯರ ಮೆಚ್ಚಿನ ವಿವಿಧ ವಿಷಯಗಳ ಪತ್ರಿಕೆಗಳನ್ನು ಹೊರತರುತ್ತಿರುವ ಡೆಲ್ಲಿಪ್ರೆಸ್ ಪ್ರಕಾಶನವು ಇದೀಗ ಶರವೇಗದಿಂದ ಮುನ್ನುಗ್ಗುತ್ತಿರುವ ಮಾಹಿತಿ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ "ಲೈವ್ ಐ.ಟಿ." ಮಾಸಿಕವನ್ನು ಇದೇಅಕ್ಟೋಬರ್ ನಿಂದ ಹೊರತರುತ್ತಿದೆ. ಅತ್ಯುತ್ತಮ ಆರ್ಟ್ ಪೇಪರ್ ನಲ್ಲಿ ಮುದ್ರಣಗೊಳ್ಳುತ್ತಿರುವ, ಮಹಿಳೆಯರಿಗಾಗಿ ಮೀಸಲಾಗಿರುವ, ಈ ಪತ್ರಿಕೆಯ ಜೊತೆ ಲೆಕ್ಕಪತ್ರದ ವಿಶೇಷ ತಂತ್ರಾಂಶ ಎಕ್ಸೆಲ್ ಕೈಪಿಡಿ ಮತ್ತು ಅದರ ಪಾಠಗಳಿರುವ ಸಿ.ಡಿ.ಯನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಸಂಚಿಕೆಯ ಜೊತೆಯೂ ಇಂತಹ ಪ್ರತ್ಯೇಕ ಕೈಪಿಡಿ ಹಾಗೂ ಸಿ.ಡಿ. ದೊರೆಯಲಿದೆಯಂತೆ.ಸುಲಭ ಇಂಗ್ಲಿಷ್, ಅತ್ಯಾಕರ್ಷಕ ಚಿತ್ರಗಳು ಮತ್ತು ಮಾಹಿತಿ ಪೂರ್ಣ ಲೇಖನಗಳಿರುವ ಲೈವ್ ಐ.ಟಿ. ಸಾಮಾನ್ಯ ಓದುಗರಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಪರಿಚಯ ಮಾಡಿಕೊಡುತ್ತದೆ. ಕೊನೆಯ ಪುಟದಲ್ಲಿರುವ ತುಣುಕು ಮಾಹಿತಿ ಕಂಪ್ಯೂಟರ್ ಕ್ಷೇತ್ರದಲ್ಲಿ ಬಳಸಲಾಗುವ ವಿವಿಧ ಪಾರಿಭಾಷಿಕ ಪದಗಳನ್ನು ಪರಿಚಯಿಸುತ್ತದೆ.ಮಾಹಿತಿ ತಂತ್ರಜ್ಞಾನದ ಮೊದಲ ಮೆಟ್ಟಿಲೆನಿಸಿರುವ ಬ್ರೌಸರ್ಗಳ ಪರಿಚಯ, ವಿವಿಧ ಬಗೆಯ ವಿದ್ಯುನ್ಮಾನ ಪರಿಕರಗಳ ಮಾಹಿತಿ, ಸಲಹೆ ಸೂಚನೆಗಳು, ಒಳದನಿಯ ವೇದಿಕೆಯಾಗಿರುವ ಬ್ಲಾಗ್ಗಳನ್ನು ಆರಂಭಿಸುವುದು, ಅಂತರ್ಜಾಲದ ಡಿಕ್ಷನರಿಗಳು, ಅಂತರ್ಜಾಲದಲ್ಲಿ ವಧು-ವರರ ಹುಡುಕಾಟ, ಲ್ಯಾಪ್ಟಾಪ್ ಜಗತ್ತು, ಶ್ರವ್ಯ, ದೃಶ್ಯ, ಮಾಹಿತಿ ತಂತ್ರಾಂಶಗಳ ತಾಣಗಳು, ಇ-ಬ್ಯಾಂಕಿಂಗ್, ಇ-ವ್ಯವಹಾರ, ಪ್ರವಾಸಿ ತಾಣಗಳು, ಸಾಮಾಜಿಕ ಸಂಪರ್ಕ ತಾಣಗಳು, ಮಕ್ಕಳ ಮೆಚ್ಚಿನ ಕಂಪ್ಯೂಟರ್ ಗೇಮ್ಸ್, ಕಂಪ್ಯೂಟರ್ ವೈರಸ್, ಹ್ಯಾಕಿಂಗ್, ಉಚಿತ ತಂತ್ರಾಂಶ ತಾಣಗಳು, ಇ-ಮೇಲ್, ಕಂಪ್ಯೂಟರ್ ನೋಡಿಕೊಳ್ಳುವ ಬಗೆ, ಏನು? ಹೇಗೆ? ಏಕೆ? ಮೊದಲಾದ ಪ್ರಶ್ನೆಗಳಿಗೆ ಉತ್ತರ ಹೀಗೆ ಹತ್ತು ಹಲವು ವಿಷಯಗಳಿಂದ ಕೂಡಿರುವ ಮೊದಲ ಸಂಚಿಕೆ ಈಗಾಗಲೇ ಮಹಿಳೆಯರ, ಯುವತಿಯರ ಮನವನ್ನು ಗೆದ್ದು ಅವರ ಗಂಡಂದಿರು ಮತ್ತು ಮಕ್ಕಳ ಮೆಚ್ಚುಗೆಗೂ ಪಾತ್ರವಾಗಿದೆ.ಮೊದಲ ಸಂಚಿಕೆಯ ಯಶಸ್ಸು ಮುಂಬರುವ ಸಂಚಿಕೆಗಳ ಮೇಲೂ ಪ್ರಭಾವ ಬೀರಿ ಇನ್ನಷ್ಟು ಹೊಸ ವಿಷಯಗಳನ್ನು ಹೊತ್ತುತರುತ್ತವೆ. ಮಾರುಕಟ್ಟೆಯ ತಂತ್ರಗಳನ್ನು ಅರಿತಿರುವ ಡೆಲ್ಲಿ ಪ್ರೆಸ್ ಗ್ರೂಪ್ನ ಸ್ಥಾಪಕ ಹಾಗೂ ವ್ಯವಸ್ಥಾಪಕ ಶ್ರೀ ಪರೇಶ್ ನಾಥ್ ಅವರ ಪುತ್ರ ಅನಂತನಾಥ್ ಅವರ ನೇತೃತ್ವದಲ್ಲಿನ ಯುವ ಉತ್ಸಾಹಿ ಸಂಪಾದಕ ಮಂಡಳಿಯು ಹೊರತರುತ್ತಿರುವ "ಲೈವ್ ಐ.ಟಿ." ಮಾಸಿಕ ಮಹಿಳೆಯರ ಅಚ್ಚುಮೆಚ್ಚಿನ ಪತ್ರಿಕೆಯಾಗುವಲ್ಲಿ ಅನುಮಾನವಿಲ್ಲ.